
ಕಣ್ಣ ಸೆಳೆವ ಪಚ್ಚೆ ಹಸಿರು ಕವಿಗಾಗಿ,
ಕಿವಿ ನಿಮಿರುವ ಪಕ್ಷಿಗಾನ ಕವಿಗಾಗಿ.
ಮೂಗ ಸೆಳೆವ ಹೂ ಸುಗಂಧ ಕವಿಗಾಗಿ.ಜಗವ ಮರೆಸೋ ಜೇನ ಸವಿಯು ಕವಿಗಾಗಿ.
ತಂಪ ನೀವ ತಂಗಾಳಿಯ ಸ್ಪರ್ಶ ಕವಿಗಾಗಿ.
ಮನ ತಣಿಸುವ ಸೋನೇಮಳೆಯು ಕವಿಗಾಗಿ.
ಕವಿಯಿಂದಲೇ ಜಗದಿ ಮಳೆಯು
ಕವಿಯಿಂದಲೇ ಜಗದಿ ಬೆಳೆಯು ಕವಿಯಿದ್ದರೆ ಜಗಕ್ಕೆ ಬೆಳೆಯು,
ಕವಿಯಿದ್ದರೆ ಜಗಕ್ಕೆ ಬೆಲೆಯು.
-ನಂದೀಶ್ ಬಂಕೇನಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ